Saturday, September 6, 2008

ಗೆಳತಿ........

ಮರೆವೆಂಬ ಸಮುದ್ರದ ನೊರೆ ನೀನಲ್ಲ ಗೆಳತಿ,
ನನ್ನ ಒಡಲೆಂಬ ಸಮುದ್ರದ ಒಡಲಾಳದ ಮುತ್ತು ನೀನು,
ಈ ಅಮೂಲ್ಯವಾದ ಮುತ್ತನ್ನು ನಾನೆಂದಿಗೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ...
ನಿನ್ನ "ಸ್ನೇಹ"ವೆಂಬ "ಹೂದೋಟ"ದಲ್ಲಿ ಬಾಡದ "ಸುಮ"ವು ನಾನಾಗಿರಲಿ ಎಂದು ಬಯಸುವ
ನೀ ಮರೆಯದ ಗೆಳೆಯ - ನಾ ಮರೆಯದ ಗೆಳತಿ..
ನಿನ್ನ ನಗು ಪ್ರಿಯದರ್ಶಿ ಅಶೋಕ

Wednesday, September 3, 2008

ಯಾವುದೀ ಸಂಬಂಧ??????

ನನ್ನ ನಿನ್ನ ಮಧ್ಯೆ ಇರುವುದು ಒಂದು ಸಂಬಂಧವೇ?? ಅದು ಸಂಬಂಧವೆನ್ನಲು ಹೋದರೆ ಅದು ಹೆಸರಿಡುವ ಸಂಬಂಧವೇ ಅಲ್ಲ..
ಸ್ನೇಹ ಅಂತ ಹೇಳಲು ಹಾಗು ಹುಡುಕಲು ಹೊರಟರೆ ಆ ಮರೆವೆಂಬ ಸಮುದ್ರ ತೀರದ ಸಕ್ಕರೆ (ಉಪ್ಪು) ಮರಳಿನ ಮೇಲೆ ಯಾರು ಇಟ್ಟ ಹೆಜ್ಜೆಗಳಿಲ್ಲ ಅಥವಾ ಅದರ ಗುರ್ತು ಸಹ ಇಲ್ಲ, ಬರಿ ಶೂನ್ಯ ಬಿಂಬ........
ಇದು ದಾಮ್ಪತ್ಯವ ಅಂತ ಭಾವಿಸಿದರೆ ನೀನೆಂದು ಏನು ಕೇಳಿಲ್ಲ, ನಾನು ಒಡವೆ, ದಿನಸಿ ತಂದಿತ್ತಿಲ್ಲ. ನೀನು ನನ್ನ ಯಾವತ್ತು ಏನು "ಎಲ್ಲಿಗೆ ಹೋಗಿದ್ದೆ" ಅಂತ ಕೇಳಿಲ್ಲ, ಹಾಗಾದರೆ ಇದನ್ನ ಅನೈತಿಕ ಅಂತ ಕರೆಯಲಾ ಒಲವೆ???? ಅದೂ ಗೊತ್ತಿಲ್ಲ...
ನೀನು ಚಂಚಲ ನದಿ, ನಿನಗೆ ನಿನ್ನದೇ ಆದ ಓಟ, ಹರಿವು , ಧುಮುಕು, ಸೆಳೆತ ಇದೆ, ನಾನು ಪ್ರಶಾಂತ ಸಮುದ್ರ, ಸಾವಿರಾರು ನಿ ( kalmasha ) ಶ್ಕಲ್ಮಶ ವಸ್ತುಗಳಿಗೆ ನಲುಗಿ ಹೋಗಿರುವ ನಿಸ್ಸಹಾಯಕ ರತ್ನಗರ್ಭ...ನಾನು ನಿನ್ನಲ್ಲಿಗೆ ಬರಲಾರೆ, ನೀನಿಲ್ಲದೆ ಇರಲಾರೆ.... ಆದ್ರೆ ಪ್ರತಿ ಕ್ಷಣ , ಪ್ರತಿ ದಿನ ಸಮುದ್ರ ಸೇರಿಯೂ ನದಿಯ ಹಂಬಲ ಮುಗಿತುವುದಿಲ್ಲ, ಸಮುದ್ರದ ಬಾಯಾರಿಕೆ ತೀರುವುದಿಲ್ಲ .....
ಇದೆಲ್ಲವನ್ನ ಬಿಟ್ಟು ನಮ್ಮದು ಅನೈತಿಕ ಅನ್ನೋಣವೆಂದರೆ ಭೂಮಿ ಮತ್ತ ಆಕಾಶ ಬೆರೆತ ಧನ್ಯ ಕ್ಷಣಗಳನ್ನ ಜನ "ಮಳೆ" ಅಂತಾರೆ ಹೊರತು ಅನೈತಿಕ ಅಂತ ಹೇಳಿದ್ದು ನಾನೆಂದೂ ಕೇಳಿಸಿಕೊಂಡಿಲ್ಲ.......
ಏನ್ ಮಾಡೋದು ಹೇಳು, ಇದನ್ನ ಹೀಗೆ ಇರಲಿ ಬಿಡು,,,,, ಈ ಸಮಾಜದ , ಜನರ ಗೊಡವೆ ನಮಗೇಕೆ? ಈ ಮೊದಲು ನಿಂಗೆ ಹೇಳಿದ್ನಲ್ಲ, ಆಕಾಶದಲ್ಲಿ ಸೂರ್ಯನ ಪಳಿಯುಳಿಕೆ ಇನ್ನು ಇದ್ದರೂ ಜನ ಆಗಲೇ ದೀಪ ಹಚ್ಹ್ತಾರೆ ಅಂತ, ಯಾವ ಬೆಳಕು ಯಾರ ಕತ್ತಲನ್ನು ಹೋಗಲಾಡಿಸ್ತಾ ಇದೆಯೋ ಗೊತ್ತಾಗ್ತಾ ಇಲ್ಲ....
ನೀ ಸೇರಬೇಕಾಗಿರುವ ನಿನ್ನ ಮೌನ ಸಾಗರ...
ನಿನ್ನವನು, ನಿನ್ನ ನಗು ಪ್ರಿಯದರ್ಶಿ............

Tuesday, August 26, 2008

ಕರುಣಾಳು ? ಬಾ !

" A Beautiful Girl With No Mercy "..........

ನಾನೊಬ್ಬ ನಿಜಕ್ಕೂ ಹುಂಬ/ಅಂಜುಬುರುಕ ಅಂತ ನಿನ್ನ ಪ್ರೀತಿಯೇಮ್ಬ ಮದುರ ಯಾತನೆಯಲ್ಲಿ ಬೀಳುವವರೆಗೂ ಗೊತ್ತಿರಲಿಲ್ಲ. ಆದರೆ ಒಂದು ಸತ್ಯವೆಂದರೆ ನಿಜಕ್ಕೂ ಶೌರ್ಯವಂತ ಅನ್ಜಲೇಬೇಕು ಹಾಗು ಅವನು ಹೆದರುತಾನೆಯೂ... ನಾನೂ ಕೂಡ ನಿನ್ನ ಜೊತೆಗಿನ ನನಸಾಗದ ಸಾವಿರ ಸಾವಿರ ಕನಸುಗಳಲ್ಲಿ ಸತ್ಯವನ್ನ ಹಾಗು ವಾಸ್ತವವನ್ನ ಹುಡುಕಲು ಪ್ರಯತ್ನ್ನಿಸುತ್ತಾ, ನಿನ್ನಲ್ಲೇ ನಾನಾಗುತ್ತ ಕಾಲ ಕಳೆಯುವ ಕನಸುಗಾರನಾಗಿರಲು ಬಯಸುತ್ತೇನೆ. ನಿನ್ನಲ್ಲಿ ನಾನು ಕಂಡುಕೊಂಡ ಈ ಬಗೆ ಹೇಗಿದೆ ನೋಡು......?????



* ಕೆಲವೊಮ್ಮೆ ನಾನು ಮಂಕುಬಡಿದ ಸೂರ್ಯ.....

ನೀನು ಬೆಳದಿಂಗಲಾಗಿಯಾದರೂ ಬರಬಹುದೆಂದು !

* ಕೆಲವೊಮ್ಮೆ ನಾನು ಸತ್ವವಿಲ್ಲದ ಜಡ ನಕ್ಷತ್ರ .........

ನೀನು ಧ್ರುವವಾಗಿ ಬೆಳಗಬಹುದೆಂದು !

* ಕೆಲವೊಮ್ಮೆ ನಾನು ನಿದ್ರೆಗಾಗಿ ಹಸಿದ ಕುಂಭ........

ನೀನು ಕನಸಿಗಾದರೂ ಬರಬಹುದೆಂದು !

* ಕೆಲವೊಮ್ಮೆ ನಾನು ಹೇಳಿಕೊಳ್ಳಲಾಗದ ಚರ್ಮ ಸ್ಥಿತಿ......

ನೀನು ಅರ್ಥೈಸುವ (ನನಗೆ-ನಿನಗೆ ಮಾತ್ರ) ಮೌನಿಯಾಗಿ ಬರುವೆಯೆಂದು !

* ಕೆಲವೊಮ್ಮೆ ನಾನು ಸಿಕ್ಕಾಪಟ್ಟೆ ಧೂಮ-ಮಾದಕ ವ್ಯಸನಿ ಕೊನೆಗೆ ಮತ್ತೆ ಜಡ....

ನೀನು ಪ್ರಕೃತಿಯ ಜೀವಿ ಸೊಳ್ಳೆಯಾಗಿ ಬಂದು ನನ್ನ ಕುತುಕುವಿಯೆಂದು !

ನಿನ್ನ ಸ್ಪರ್ಶವಾದರೂ ಸಿಗಬಹುದೆಂಬ ಹಂಬಲದಿಂದ !

* ಕೆಲವೊಮ್ಮೆ ನಾನು ಸಿಗದ ಸಂತೋಷಕ್ಕಾಗಿ ಹಂಬಲಿಸುವವ............

ನೀನು ನಾಳೆಯಾದರೂ ಸಿಗಬಹುದೆಂದು !

* ಕೆಲವೊಮ್ಮೆ ನಾನು ಸಾವಿನ ಕಣಿವೆಗಳಲ್ಲಿ ನಡೆಯಬೇಕೆಂಬ ಹುಂಬತನ ...........

ನೀನು ನನ್ನವಳಾಗಿ ನಿನ್ನ ಕಾಲ್ಪನಿಕ ಧ್ವನಿಯಾದರೂ ಕೇಳಬಹುದೆಂದು !

* ಕೆಲವೊಮ್ಮೆ ನಾನು, ನೀನು ನನಗೆ ಸಿಗಲಿಲ್ಲ ಎಂದು ನಿಡುಸುಯ್ಯುವವ .........

ನೀನು ನಾಳೆಯಾದರೂ ಸಿಗುವೆ ( ಕಾಲ್ಕ್ಪನಿಕ ) ಎಂಬ ಭರವಸೆಯಿಂದ !

* ಕೊನೆಗೆ ,,,,,

* ಈ ಕೆಲವೊಮ್ಮೆ ನನ್ನೆಲ್ಲ ಬೇಸರಗಳನ್ನ ಮಡಚಿಟ್ಟು ಹೊಸ ದಿಗಂತ, ಮುಂಜಾನೆಯತ್ತ ಹೆಜ್ಜೆಯಿಡಲು ಧೈರ್ಯಹಾಕುವವ ........

ನೀನು ನನ್ನವಳಾಗಿ ನನ್ನ ಜೊತೆಗೆಯೇ, ನನ್ನ ಬೆನ್ನ ಹಿಂದೆಯೇ ಹಾರೈಸುತ್ತೆಯೆಂದು !

So ಬರ್ತಿಯಲ್ಲ ?????

ಇಂತಿ ನಿನ್ನ ಪ್ರೀತಿಯ ........

ಅಸಹನೆಯಿಂದ ಕದಲುತ್ತಿರುವ ಅತೃಪ್ತ ಸಮುದ್ರ .....

ನಿಮ್ಮ ನಗು ಪ್ರಿಯದರ್ಶಿ ........

Sunday, August 17, 2008

"ವಿ" ಚಿತ್ರ ಪ್ರೇಮ........

ನನ್ನವಳ ನಗುವೇ ನನಗೆ ಅರುಣೋದಯ,
ನನ್ನವಳ ಹುಸಿಮುನಿಸು ನನಗೆ ಸೂರ್ಯಾಸ್ತ,
ನನ್ನವಳ ಮರುಮಾತು ನನಗೆ ಹೊಸ ಆನಂದವು,
ನನ್ನವಳ ಜೊತೆಗಿನ ಜಗಳ,ಅದರಲ್ಲಿಸೋತು ಗೆಲ್ಲುವ ಖುಷಿ,
ನನಗೆ ಬಲು/ತುಂಬಾ ಇಷ್ಟ,
ಅವಳ ಮಾತಿನಲ್ಲಿರುವ ಪ್ರತಿ ಅವಲೋಕನ ನನಗೆ ಇಷ್ಟ, ಅದು ಅವಳಿಗೂ ಕೂಡ,,
ಆದರೂ ಅವಳಂತಹ ಒಳ್ಳೆಯವಳನ್ನ ಪ್ರೀತಿಸಿ ಅದ್ಹೇಗೆ, ಅದ್ಹೇಗೆ ನಾನು ಮೋಸ ಹೋದೆ ?
ಕೊನೆಗೂ ಗೊತ್ತಾಗದೇ ಹೋಯ್ತು.
ಅವಳ ಒಂದು ಶೂನ್ಯ ಮೌನ ನನಗೆ ಸಾವಿನ ಹೊಸ್ತಿಲು,
ಇಷ್ಟೆಲ್ಲದರ ನಡುವೆಯೂ ಅವಳು ನನಗೆ ಇಷ್ಟ
,ಏಕೆಂದರೆ "ಅವಳು ನನ್ನ ಕಲ್ಪನೆಯಲ್ಲಿ ಕೆತ್ತಲ್ಪಡುವ/ಕೆತ್ತಲ್ಪಟ್ಟ ವಾಸ್ತವದ ಕಲಾಕೃತಿ",,,,,
ಅವಳೇ ನನಗೆ ಸಾವು, ಅವಳೇ ನನಗೆ ಹುಟ್ಟು ಕೂಡ......
ನಿಮ್ಮ ನಗು ಪ್ರಿಯದರ್ಶಿ......

Tuesday, July 1, 2008

ನನ್ನವಳು ಮತ್ತು ನಾನು........

ಅವಳದು ಕುರುಪ ಸೌಂದರ್ಯ, ನಾನೊಬ್ಬ ಶ್ರೀಮಂತ ಭಿಕ್ಷುಕ,,,,,
ಆದರು ನಾವಿಬ್ಬರೂ ವಬ್ಬರಿಗೊಬ್ಬರು ಇಷ್ಟ, ತುಂಬಾ ದಿನ ಆಯ್ತು ನಿನ್ ನೋಡಿ ಬಾರೋ ಅಂತಾಳೆ.
ಹೋದ್ರೆ ಮಾತೆ ಬರೋಲ್ಲ, ಯಾವಾಗಲು ನನ್ ಮಾತು ಜಾಸ್ತಿ ಅಂತಿದ್ಲು, ಇವತ್ತು ಮಾತೆ ಹೊರಡ್ತಿಲ್ಲ.
ಏನಾದ್ರು ಹೇಳು ಅಂದ್ರೆ ಸುಮ್ನೆ ಕೂತ್ಕೋ, ಇವತ್ತು ನಮ್ಮಿಬ್ಬರ ನೋಡಿ ಶಶಿ ನಗುತಿರುವ, ಹೀಗೆ ಬೆಳದಿಂಗಳ ಕಾರ್ಮುಗಿಲಿನಲ್ಲೇ ರಾತ್ರಿ ಕಳೆಯೋಣ ಅಂತಾಳೆ..
ಸುಮ್ಮನೆ ಅಂಗಾತ ಮಲಗಿ ನಕ್ಷತ್ರಗಳ ಎಣಿಸುತ್ತ ಆಟ ಆಡೋಣ ಅಂತಾಳೆ.
ಬೇಡ ಅಂದ್ರೆ ಸುಮ್ಮನೆ ಮುತ್ತಿಕ್ಕಿ ನಸು ನಾಚುತ್ತಾಳೆ ನನ್ನೀ ಹುಡುಗಿ.
ಹೇಳುತ್ತಲೇ ಹೋಗ್ತಾಳೆ ಆದ್ರೆ,,,,,,,
ಅವಳದು ಸ್ವಲ್ಪ ವರಟು ಮಾತು - ನಂಗೆ ಅರ್ಥ ಆಗೋಲ್ಲ,
ನನ್ನದು ಸ್ವಲ್ಪ ವಗಟು ಮಾತು ಅವಳಿಗೆ ಅರ್ಥ ಆಗೋಲ್ಲ....
ನನ್ನ ನೆನಸ್ಕೊಂಡ ಅಂತ ಕೇಳ್ತಾಳೆ , ನಾನು - ನಿನ್ನ ಮರೆಯೋಕ್ಕೆ ಪುರುಸೊತ್ತು ಆದ್ರೆ ತಾನೇ ಅಂತ ಹೇಳಿದೆ...
ನಾನು ಕನಸ್ನಲ್ಲಿ ಬಂದನಾ ಅಂತಾಳೆ - ನಾನು ಮಲಗುವುದೆ ನಿನ್ನ ಕನಸುಗಳ ಮಧ್ಯೆ ಅಂತ ಹೇಳಿದೆ...
ನಂತರ ಅವಳದು ಮೌನ ಸರದಿ, ಸ್ವಲ್ಪ ಮುನಿಸು..
ನಾನಂದೆ ನಿನ್ನ ಮುನಿಸು - ನನ್ನ ಮುನಿಸಿನಿಂದ ಈ ಜೀವನವೇ ಮುನಿಸಿಕೊಂಡಿದೆ...
ನಮ್ಮಿಬ್ಬರ ಮಿಲನ ಬಲು ಚೆಂದ ಕಣ್ರೀ.
ಏನಂತಿರ??ನಿಮ್ಮ ನಗು ಪ್ರಿಯದರ್ಶಿ.....

Sunday, June 29, 2008

ಪ್ರೀತಿ, ಪ್ರೇಮ, ಇವೆಲ್ಲ ಸ್ವಾರ್ಥದ ಮೂಲಗಳೋ ಅಥವಾ ನಿಸ್ವಾರ್ಥದ ಮೂಲಗಳೋ???

ಹೇಳಿಕೊಳ್ಳಲಾಗದ ಪ್ರೇಮದ ಆ ಸ್ಥಿತಿ ಏಷ್ಟು ಮಧುರವಲ್ಲವೇ?ಅದೊಂಥರ ಮುಸ್ಸಂಜೆಯಲಿ ದೀಪ ಹಚ್ಚಿದಂತೆ. ಅಲ್ಲಿ ಆಕಾಶದಲ್ಲಿ ಸೂರ್ಯನ ಬೆಳಕಿನ ಪಳೆಯುಳಿಕೆ ಇನ್ನು ಇದೆ. ಕತ್ತಲಿನ್ನು ಧರೆಗೆ ಇಳಿದಿಲ್ಲ. ಇದ್ದಾಗಲೇ ದೇವರ ದೀಪ ಹಚ್ಚಿತ್ತಾಗಿದೆ. ಯಾವ ಬೆಳಕು, ಯಾವ ಕಿರಣ ನಮಗೆ ನಮ್ಮ ದೇವರನ್ನು ಕಾಣುವಂತೆ ಮಾಡುತ್ತಿರುವದು ಗೊತ್ತಿಲ್ಲ.

ಅಷ್ಟಕ್ಕೂ ಪ್ರೀತಿ ಎಂದರೆ ಏನು? ಮನಸ್ಸು ಕೊಟ್ಟಿತು ನೀರಾಳದ ಉತ್ತರ.....of course, ಪ್ರೀತಿ, ಪ್ರೇಮ ಎನ್ನುವುದು ಪದಗಳಾಗಿಯೇ, ಮಾತಿನ ರೂಪದಲ್ಲಿಯೇ ವ್ಯಕ್ತವಾಗಬೇಕು ಎಂಬ ನಿಯಮವೇನೂ ಬೇಕಾಗಿಲ್ಲ. ಏಷ್ಟೋ ಸಲ ಪ್ರೀತಿಯನ್ನು ಹೇಳಿಕೊಳ್ಳಲು ಮೌನವೇ ವಂದು ಅತ್ಯಂತ ಸಮೃದ್ಧ ಭಾಷೆ ಅನಿಸಿಬಿಡುತ್ತದೆ. ಅದಿಕ್ಕೆ ಹೆಚ್ಚಾಗಿ ಪ್ರೇಮಿಗಳು ಮೌನ ಸಂಭಾಷಣೆಯಲ್ಲಿ ಇರುತ್ತಾರೆ ಏನೋ?. ತುಂಬಾ ಚೆನ್ನಾಗಿ ನನ್ನನ್ನು ಅರ್ಥ ಮಾಡಿಕೊಂಡಿರುವ ಅವಳು/ಅವನು ನನ್ನೊಂದಿಗೆ ಮಾತೆ ಆದಬೇಕಿಲ್ಲ. ಇಬ್ಬರು ಸುಮ್ಮನೆ ಏಕಾಂತದಲಿ, ಬೆಳದಿಂಗಳ ರಾತ್ರಿಯಲಿ, ಮುಸ್ಸಂಜೆಯ ಭಾವನೆಗಳಲಿ ಅವಳು ಮಾತನಾಡದೇ ಇದ್ದರೂ ನನಗೆ ಕೆಲಿಸಿರುತ್ತದೆ, ನಾನು ಓ ಎಂದು ದನಿಗೂದದಿದ್ದರೂ ಅವಳು ಕೂಗಿದಕ್ಕೆ ಅವಳಿಗೆ ಮೌನದಲ್ಲೇ ಮನಸ್ಸಿನ ಮುಖಾಂತರ ಉತ್ತರ ಸಿಕ್ಕಿರುತ್ತದೆ.ಮಾತು, ಹೃದಯ, ಪ್ರೀತಿ . ವಿಶ್ವಾಸ, ಇವೆಲ್ಲ ಸಂಪೂರ್ಣವಾಗಿ ಸೋಲೋದೆ ಇಂಥ ವಂದು ಏಕಾಂತ ಹಾಗು ಗಾಢ ಮೌನದಲ್ಲಿ.
ಹೌದು, ನಿಮ್ ಪ್ರೀತಿ ಯಾವ ತರಹ ಸ್ನೇಹಿತರೆ????
ನಿಮ್ಮ ನಗು ಪ್ರಿಯದರ್ಶಿ........
ಮುಂಜಾನೆಯ ಮಂಜಿನಂತಿರುವ ಅವಳ ನುಗುವಲಿ ಆನೊಂದು ಮುಗುಲ್ನಗೆಯಾಗಿದ್ದರೆ?,ಕೋಗಿಲೆಯ ಇಂಪು ನಾದದನ್ತಿರುವ ಅವಳ ಪಿಸುಮಾತುಗಳಲಿನಾನೊಂದು ತುಸುಮಾತಾಗಿದ್ದರೆ?,ಆಗಸಕ್ಕೆಣಿ ಹಾಕುವಂತಹ ಅವಳ ಕನಸುಗಳಲಿನಾನೊಂದು ಪುಟ್ಟ ಇಣುಕಾಗಿದ್ದರೆ?,ಏಷ್ಟೋ ಹೂಗಳ ರಾಶಿಯನ್ತಿರುವ, ಅವಳ ಯೋಚನೆಗಳಲಿನಾನೊಂದು ಚಿಕ್ಕ ವಿಷಯವಾಗಿದ್ದರೆ?,ಹೆಜ್ಜೆ ಇಟ್ಟಲ್ಲೆಲ್ಲ ಕೇಳುವ ಅವಳ ಕಾಲ್ಗೆಜ್ಜೆಯ ನಾದದಲಿನಾನೊಂದು ಶ್ರುತಿಯಾಗಿದ್ದರೆ?,ಈ "ಇದ್ದಾರೆ" ವನ್ದಿರದಿದ್ದರೆ, ಇವುಗಳಲ್ಲಿನಾನು ಯಾವುದಾದರೊಂದಾಗಿದ್ದರೆ?,ಆ ದೇವರೂ ಬಂದು ಕೇಳಿದರೂ ನಲ್ಲೆ,ನಾನೆನ್ನುತ್ತಿದ್ದೆ, "ಸ್ವರ್ಗವೇ"? !ಅದು ನಾನೊಲ್ಲೆ",___ನಿನ್ನ ಉಸಿರು....ಪ್ರಿಯದರ್ಶಿ........

ಈ ಪ್ರೀತಿನೆ ಹೀಗೆನಾ?

ಪ್ರೇಮ , ಪ್ರೀತಿ ಇವೆಲ್ಲ ಸ್ವಾರ್ಥದ ಮೂಲಗಳೋ ನಿಸ್ವಾರ್ಥದ ಮೂಲಗಳೋ ? ಅಷ್ಟಕ್ಕೂ ಪ್ರೀತಿ ಎಂದರೆ ಏನು? ಮನಸ್ಸು ಕೊಟ್ಟಿತು ನೀರಾಳದ ಉತ್ತರ.....of course, ಪ್ರೀತಿ, ಪ್ರೇಮ ಎನ್ನುವುದು ಪದಗಳಾಗಿಯೇ, ಮಾತಿನ ರೂಪದಲ್ಲಿಯೇ ವ್ಯಕ್ತವಾಗಬೇಕು ಎಂಬ ನಇಯಮವೇನು ಬೇಕಾಗಿಲ್ಲ. ಏಷ್ಟೋ ಸಲ ಪ್ರೀತಿಯನ್ನು ಹೇಳಿಕೊಳ್ಳಲು ಮೌನವೇ ವಂದು ಅತ್ಯಂತ ಸಮೃದ್ಧ ಭಾಷೆ ಅನಿಸಿಬಿಡುತ್ತದೆ. ಅದಿಕ್ಕೆ ಹೆಚ್ಚಾಗಿ ಪ್ರೇಮಿಗಳು ಮೌನ ಸಂಭಾಷಣೆಯಲ್ಲಿ ಇರುತ್ತಾರೆ ಏನೋ?. ತುಂಬಾ ಚೆನ್ನಾಗಿ ನನ್ನನ್ನು ಅರ್ಥ ಮಾಡಿಕೊಂಡಿರುವ ಅವಳು/ಅವನು ನನ್ನೊಂದಿಗೆ ಮಾತೆ ಆದಬೇಕಿಲ್ಲ. ಇಬ್ಬರು ಸುಮ್ಮನೆ ಏಕಾಂತದಲಿ, ಬೆಳದಿಂಗಳ ರಾತ್ರಿಯಲಿ, ಮುಸ್ಸಂಜೆಯ ಭಾವನೆಗಳಲಿ ಅವಳು ಮಾತನಾಡದೇ ಇದ್ದರೂ ನನಗೆ ಕೆಲಿಸಿರುತ್ತದೆ, ನಾನು ಓ ಎಂದು ದನಿಗೂದದಿದ್ದರೂ ಅವಳು ಕೂಗಿದಕ್ಕೆ ಅವಳಿಗೆ ಮೌನದಲ್ಲೇ ಮನಸ್ಸಿನ ಮುಖಾಂತರ ಉತ್ತರ ಸಿಕ್ಕಿರುತ್ತದೆ.ಮಾತು, ಹೃದಯ, ಪ್ರೀತಿ . ವಿಶ್ವಾಸ, ಇವೆಲ್ಲ ಸಂಪೂರ್ಣವಾಗಿ ಸೋಲೋದೆ ಇಂಥ ವಂದು ಏಕಾಂತ ಹಾಗು ಗಾಢ ಮೌನದಲ್ಲಿ.ಹೌದು ನಿಮ್ ಪ್ರೀತಿ ಯಾವ ತರಹ ಸ್ನೇಹಿತರೆ????ನಿಮ್ಮ ನಗು ಪ್ರಿಯದರ್ಶಿ........

ಅವಳು ನಿನಗೆ ಏನಾಗಬೇಕು??

ಇದೊಂದು ಹೊಸ
ಅಣುಕುಮನಸ್ಸಿನ ಮೇಲೆ ಪ್ರಶ್ನೆಯ ಮುಸುಕು.
ಅವಳು ನಿನಗೆ ಏನಾಗಬೇಕು???
ಮನಸ್ಸು ಬಿಟ್ಟಿತು ನಿರಾಳದ ಉಸಿರ
ಜೊತೆಗೆ ಕೊಟ್ಟಿತು ಉದಾರದ ಉತ್ತರ......
"ಅವಳು ನನಗೆ ಕಂಬನಿಯಾಗಬೇಕು,
ಜೊತೆಗೆಯೇ ನನ್ನ ನಗು ಕೂಡ"
!"ಅವಳು ನನಗೆ ಸೋಲಿನ ಕಹಿಯಾಗಬೇಕು,
ಜೊತೆಗೆ ನನ್ನ ಜಯದ ಸಿಹಿ ಕೂಡ"!
"ಅವಳು ನನಗೆ ಕನಸಿನ ಮಿಥ್ಯವಾಗಬೇಕು,
ಜೊತೆಗೆ ನನ್ನ ವಾಸ್ತವದ ಸತ್ಯ ಕೂಡ"!
"ಅವಳು ನನಗೆ ವಿರಹ ವೆದನೆಯಾಗಬೇಕು,
ಜೊತೆಗೆ ನನ್ನ ಮೊದಲ ಸ್ಪರ್ಶದ ಅನುಭವ ಕೂಡ"!
"ಅವಳು ನನಗೆ ಬಳಲಿಸುವ ಆಯಾಸವಾಗಬೇಕು,
ಜೊತೆಗೆ ನನ್ನ ಚೇತನ ಕೂಡ"!*
ಅವಳು ನನಗೆ ಸಾವಾಗಬೇಕು*
ಜೊತೆಗೆಯೇ ನನ್ನ ಹುಟ್ಟು ಕೂಡ,
ಇದಕ್ಕಿಂತ ಹೆಚ್ಚಾಗಿ ಅವಳು ನನಗೆನಾಗಬಳ್ಳಲು "????
ನಿನ್ನ ನಗು ಪ್ರಿಯದರ್ಶಿ....