ಇದೊಂದು ಹೊಸ
ಅಣುಕುಮನಸ್ಸಿನ ಮೇಲೆ ಪ್ರಶ್ನೆಯ ಮುಸುಕು.
ಅವಳು ನಿನಗೆ ಏನಾಗಬೇಕು???
ಮನಸ್ಸು ಬಿಟ್ಟಿತು ನಿರಾಳದ ಉಸಿರ
ಜೊತೆಗೆ ಕೊಟ್ಟಿತು ಉದಾರದ ಉತ್ತರ......
"ಅವಳು ನನಗೆ ಕಂಬನಿಯಾಗಬೇಕು,
ಜೊತೆಗೆಯೇ ನನ್ನ ನಗು ಕೂಡ"
!"ಅವಳು ನನಗೆ ಸೋಲಿನ ಕಹಿಯಾಗಬೇಕು,
ಜೊತೆಗೆ ನನ್ನ ಜಯದ ಸಿಹಿ ಕೂಡ"!
"ಅವಳು ನನಗೆ ಕನಸಿನ ಮಿಥ್ಯವಾಗಬೇಕು,
ಜೊತೆಗೆ ನನ್ನ ವಾಸ್ತವದ ಸತ್ಯ ಕೂಡ"!
"ಅವಳು ನನಗೆ ವಿರಹ ವೆದನೆಯಾಗಬೇಕು,
ಜೊತೆಗೆ ನನ್ನ ಮೊದಲ ಸ್ಪರ್ಶದ ಅನುಭವ ಕೂಡ"!
"ಅವಳು ನನಗೆ ಬಳಲಿಸುವ ಆಯಾಸವಾಗಬೇಕು,
ಜೊತೆಗೆ ನನ್ನ ಚೇತನ ಕೂಡ"!*
ಅವಳು ನನಗೆ ಸಾವಾಗಬೇಕು*
ಜೊತೆಗೆಯೇ ನನ್ನ ಹುಟ್ಟು ಕೂಡ,
ಇದಕ್ಕಿಂತ ಹೆಚ್ಚಾಗಿ ಅವಳು ನನಗೆನಾಗಬಳ್ಳಲು "????
ನಿನ್ನ ನಗು ಪ್ರಿಯದರ್ಶಿ....
Sunday, June 29, 2008
Subscribe to:
Post Comments (Atom)
No comments:
Post a Comment