ನನ್ನ ನಿನ್ನ ಮಧ್ಯೆ ಇರುವುದು ಒಂದು ಸಂಬಂಧವೇ?? ಅದು ಸಂಬಂಧವೆನ್ನಲು ಹೋದರೆ ಅದು ಹೆಸರಿಡುವ ಸಂಬಂಧವೇ ಅಲ್ಲ..
ಸ್ನೇಹ ಅಂತ ಹೇಳಲು ಹಾಗು ಹುಡುಕಲು ಹೊರಟರೆ ಆ ಮರೆವೆಂಬ ಸಮುದ್ರ ತೀರದ ಸಕ್ಕರೆ (ಉಪ್ಪು) ಮರಳಿನ ಮೇಲೆ ಯಾರು ಇಟ್ಟ ಹೆಜ್ಜೆಗಳಿಲ್ಲ ಅಥವಾ ಅದರ ಗುರ್ತು ಸಹ ಇಲ್ಲ, ಬರಿ ಶೂನ್ಯ ಬಿಂಬ........
ಇದು ದಾಮ್ಪತ್ಯವ ಅಂತ ಭಾವಿಸಿದರೆ ನೀನೆಂದು ಏನು ಕೇಳಿಲ್ಲ, ನಾನು ಒಡವೆ, ದಿನಸಿ ತಂದಿತ್ತಿಲ್ಲ. ನೀನು ನನ್ನ ಯಾವತ್ತು ಏನು "ಎಲ್ಲಿಗೆ ಹೋಗಿದ್ದೆ" ಅಂತ ಕೇಳಿಲ್ಲ, ಹಾಗಾದರೆ ಇದನ್ನ ಅನೈತಿಕ ಅಂತ ಕರೆಯಲಾ ಒಲವೆ???? ಅದೂ ಗೊತ್ತಿಲ್ಲ...
ನೀನು ಚಂಚಲ ನದಿ, ನಿನಗೆ ನಿನ್ನದೇ ಆದ ಓಟ, ಹರಿವು , ಧುಮುಕು, ಸೆಳೆತ ಇದೆ, ನಾನು ಪ್ರಶಾಂತ ಸಮುದ್ರ, ಸಾವಿರಾರು ನಿ ( kalmasha ) ಶ್ಕಲ್ಮಶ ವಸ್ತುಗಳಿಗೆ ನಲುಗಿ ಹೋಗಿರುವ ನಿಸ್ಸಹಾಯಕ ರತ್ನಗರ್ಭ...ನಾನು ನಿನ್ನಲ್ಲಿಗೆ ಬರಲಾರೆ, ನೀನಿಲ್ಲದೆ ಇರಲಾರೆ.... ಆದ್ರೆ ಪ್ರತಿ ಕ್ಷಣ , ಪ್ರತಿ ದಿನ ಸಮುದ್ರ ಸೇರಿಯೂ ನದಿಯ ಹಂಬಲ ಮುಗಿತುವುದಿಲ್ಲ, ಸಮುದ್ರದ ಬಾಯಾರಿಕೆ ತೀರುವುದಿಲ್ಲ .....
ಇದೆಲ್ಲವನ್ನ ಬಿಟ್ಟು ನಮ್ಮದು ಅನೈತಿಕ ಅನ್ನೋಣವೆಂದರೆ ಭೂಮಿ ಮತ್ತ ಆಕಾಶ ಬೆರೆತ ಧನ್ಯ ಕ್ಷಣಗಳನ್ನ ಜನ "ಮಳೆ" ಅಂತಾರೆ ಹೊರತು ಅನೈತಿಕ ಅಂತ ಹೇಳಿದ್ದು ನಾನೆಂದೂ ಕೇಳಿಸಿಕೊಂಡಿಲ್ಲ.......
ಏನ್ ಮಾಡೋದು ಹೇಳು, ಇದನ್ನ ಹೀಗೆ ಇರಲಿ ಬಿಡು,,,,, ಈ ಸಮಾಜದ , ಜನರ ಗೊಡವೆ ನಮಗೇಕೆ? ಈ ಮೊದಲು ನಿಂಗೆ ಹೇಳಿದ್ನಲ್ಲ, ಆಕಾಶದಲ್ಲಿ ಸೂರ್ಯನ ಪಳಿಯುಳಿಕೆ ಇನ್ನು ಇದ್ದರೂ ಜನ ಆಗಲೇ ದೀಪ ಹಚ್ಹ್ತಾರೆ ಅಂತ, ಯಾವ ಬೆಳಕು ಯಾರ ಕತ್ತಲನ್ನು ಹೋಗಲಾಡಿಸ್ತಾ ಇದೆಯೋ ಗೊತ್ತಾಗ್ತಾ ಇಲ್ಲ....
ನೀ ಸೇರಬೇಕಾಗಿರುವ ನಿನ್ನ ಮೌನ ಸಾಗರ...
ನಿನ್ನವನು, ನಿನ್ನ ನಗು ಪ್ರಿಯದರ್ಶಿ............
Wednesday, September 3, 2008
Subscribe to:
Post Comments (Atom)
No comments:
Post a Comment