ನನ್ನವಳ ನಗುವೇ ನನಗೆ ಅರುಣೋದಯ,
ನನ್ನವಳ ಹುಸಿಮುನಿಸು ನನಗೆ ಸೂರ್ಯಾಸ್ತ,
ನನ್ನವಳ ಮರುಮಾತು ನನಗೆ ಹೊಸ ಆನಂದವು,
ನನ್ನವಳ ಜೊತೆಗಿನ ಜಗಳ,ಅದರಲ್ಲಿಸೋತು ಗೆಲ್ಲುವ ಖುಷಿ,
ನನಗೆ ಬಲು/ತುಂಬಾ ಇಷ್ಟ,
ಅವಳ ಮಾತಿನಲ್ಲಿರುವ ಪ್ರತಿ ಅವಲೋಕನ ನನಗೆ ಇಷ್ಟ, ಅದು ಅವಳಿಗೂ ಕೂಡ,,
ಆದರೂ ಅವಳಂತಹ ಒಳ್ಳೆಯವಳನ್ನ ಪ್ರೀತಿಸಿ ಅದ್ಹೇಗೆ, ಅದ್ಹೇಗೆ ನಾನು ಮೋಸ ಹೋದೆ ?
ಕೊನೆಗೂ ಗೊತ್ತಾಗದೇ ಹೋಯ್ತು.
ಅವಳ ಒಂದು ಶೂನ್ಯ ಮೌನ ನನಗೆ ಸಾವಿನ ಹೊಸ್ತಿಲು,
ಇಷ್ಟೆಲ್ಲದರ ನಡುವೆಯೂ ಅವಳು ನನಗೆ ಇಷ್ಟ
,ಏಕೆಂದರೆ "ಅವಳು ನನ್ನ ಕಲ್ಪನೆಯಲ್ಲಿ ಕೆತ್ತಲ್ಪಡುವ/ಕೆತ್ತಲ್ಪಟ್ಟ ವಾಸ್ತವದ ಕಲಾಕೃತಿ",,,,,
ಅವಳೇ ನನಗೆ ಸಾವು, ಅವಳೇ ನನಗೆ ಹುಟ್ಟು ಕೂಡ......
ನಿಮ್ಮ ನಗು ಪ್ರಿಯದರ್ಶಿ......
Sunday, August 17, 2008
Subscribe to:
Post Comments (Atom)
No comments:
Post a Comment