Sunday, June 29, 2008

ಪ್ರೀತಿ, ಪ್ರೇಮ, ಇವೆಲ್ಲ ಸ್ವಾರ್ಥದ ಮೂಲಗಳೋ ಅಥವಾ ನಿಸ್ವಾರ್ಥದ ಮೂಲಗಳೋ???

ಹೇಳಿಕೊಳ್ಳಲಾಗದ ಪ್ರೇಮದ ಆ ಸ್ಥಿತಿ ಏಷ್ಟು ಮಧುರವಲ್ಲವೇ?ಅದೊಂಥರ ಮುಸ್ಸಂಜೆಯಲಿ ದೀಪ ಹಚ್ಚಿದಂತೆ. ಅಲ್ಲಿ ಆಕಾಶದಲ್ಲಿ ಸೂರ್ಯನ ಬೆಳಕಿನ ಪಳೆಯುಳಿಕೆ ಇನ್ನು ಇದೆ. ಕತ್ತಲಿನ್ನು ಧರೆಗೆ ಇಳಿದಿಲ್ಲ. ಇದ್ದಾಗಲೇ ದೇವರ ದೀಪ ಹಚ್ಚಿತ್ತಾಗಿದೆ. ಯಾವ ಬೆಳಕು, ಯಾವ ಕಿರಣ ನಮಗೆ ನಮ್ಮ ದೇವರನ್ನು ಕಾಣುವಂತೆ ಮಾಡುತ್ತಿರುವದು ಗೊತ್ತಿಲ್ಲ.

ಅಷ್ಟಕ್ಕೂ ಪ್ರೀತಿ ಎಂದರೆ ಏನು? ಮನಸ್ಸು ಕೊಟ್ಟಿತು ನೀರಾಳದ ಉತ್ತರ.....of course, ಪ್ರೀತಿ, ಪ್ರೇಮ ಎನ್ನುವುದು ಪದಗಳಾಗಿಯೇ, ಮಾತಿನ ರೂಪದಲ್ಲಿಯೇ ವ್ಯಕ್ತವಾಗಬೇಕು ಎಂಬ ನಿಯಮವೇನೂ ಬೇಕಾಗಿಲ್ಲ. ಏಷ್ಟೋ ಸಲ ಪ್ರೀತಿಯನ್ನು ಹೇಳಿಕೊಳ್ಳಲು ಮೌನವೇ ವಂದು ಅತ್ಯಂತ ಸಮೃದ್ಧ ಭಾಷೆ ಅನಿಸಿಬಿಡುತ್ತದೆ. ಅದಿಕ್ಕೆ ಹೆಚ್ಚಾಗಿ ಪ್ರೇಮಿಗಳು ಮೌನ ಸಂಭಾಷಣೆಯಲ್ಲಿ ಇರುತ್ತಾರೆ ಏನೋ?. ತುಂಬಾ ಚೆನ್ನಾಗಿ ನನ್ನನ್ನು ಅರ್ಥ ಮಾಡಿಕೊಂಡಿರುವ ಅವಳು/ಅವನು ನನ್ನೊಂದಿಗೆ ಮಾತೆ ಆದಬೇಕಿಲ್ಲ. ಇಬ್ಬರು ಸುಮ್ಮನೆ ಏಕಾಂತದಲಿ, ಬೆಳದಿಂಗಳ ರಾತ್ರಿಯಲಿ, ಮುಸ್ಸಂಜೆಯ ಭಾವನೆಗಳಲಿ ಅವಳು ಮಾತನಾಡದೇ ಇದ್ದರೂ ನನಗೆ ಕೆಲಿಸಿರುತ್ತದೆ, ನಾನು ಓ ಎಂದು ದನಿಗೂದದಿದ್ದರೂ ಅವಳು ಕೂಗಿದಕ್ಕೆ ಅವಳಿಗೆ ಮೌನದಲ್ಲೇ ಮನಸ್ಸಿನ ಮುಖಾಂತರ ಉತ್ತರ ಸಿಕ್ಕಿರುತ್ತದೆ.ಮಾತು, ಹೃದಯ, ಪ್ರೀತಿ . ವಿಶ್ವಾಸ, ಇವೆಲ್ಲ ಸಂಪೂರ್ಣವಾಗಿ ಸೋಲೋದೆ ಇಂಥ ವಂದು ಏಕಾಂತ ಹಾಗು ಗಾಢ ಮೌನದಲ್ಲಿ.
ಹೌದು, ನಿಮ್ ಪ್ರೀತಿ ಯಾವ ತರಹ ಸ್ನೇಹಿತರೆ????
ನಿಮ್ಮ ನಗು ಪ್ರಿಯದರ್ಶಿ........

No comments: