Tuesday, August 26, 2008

ಕರುಣಾಳು ? ಬಾ !

" A Beautiful Girl With No Mercy "..........

ನಾನೊಬ್ಬ ನಿಜಕ್ಕೂ ಹುಂಬ/ಅಂಜುಬುರುಕ ಅಂತ ನಿನ್ನ ಪ್ರೀತಿಯೇಮ್ಬ ಮದುರ ಯಾತನೆಯಲ್ಲಿ ಬೀಳುವವರೆಗೂ ಗೊತ್ತಿರಲಿಲ್ಲ. ಆದರೆ ಒಂದು ಸತ್ಯವೆಂದರೆ ನಿಜಕ್ಕೂ ಶೌರ್ಯವಂತ ಅನ್ಜಲೇಬೇಕು ಹಾಗು ಅವನು ಹೆದರುತಾನೆಯೂ... ನಾನೂ ಕೂಡ ನಿನ್ನ ಜೊತೆಗಿನ ನನಸಾಗದ ಸಾವಿರ ಸಾವಿರ ಕನಸುಗಳಲ್ಲಿ ಸತ್ಯವನ್ನ ಹಾಗು ವಾಸ್ತವವನ್ನ ಹುಡುಕಲು ಪ್ರಯತ್ನ್ನಿಸುತ್ತಾ, ನಿನ್ನಲ್ಲೇ ನಾನಾಗುತ್ತ ಕಾಲ ಕಳೆಯುವ ಕನಸುಗಾರನಾಗಿರಲು ಬಯಸುತ್ತೇನೆ. ನಿನ್ನಲ್ಲಿ ನಾನು ಕಂಡುಕೊಂಡ ಈ ಬಗೆ ಹೇಗಿದೆ ನೋಡು......?????



* ಕೆಲವೊಮ್ಮೆ ನಾನು ಮಂಕುಬಡಿದ ಸೂರ್ಯ.....

ನೀನು ಬೆಳದಿಂಗಲಾಗಿಯಾದರೂ ಬರಬಹುದೆಂದು !

* ಕೆಲವೊಮ್ಮೆ ನಾನು ಸತ್ವವಿಲ್ಲದ ಜಡ ನಕ್ಷತ್ರ .........

ನೀನು ಧ್ರುವವಾಗಿ ಬೆಳಗಬಹುದೆಂದು !

* ಕೆಲವೊಮ್ಮೆ ನಾನು ನಿದ್ರೆಗಾಗಿ ಹಸಿದ ಕುಂಭ........

ನೀನು ಕನಸಿಗಾದರೂ ಬರಬಹುದೆಂದು !

* ಕೆಲವೊಮ್ಮೆ ನಾನು ಹೇಳಿಕೊಳ್ಳಲಾಗದ ಚರ್ಮ ಸ್ಥಿತಿ......

ನೀನು ಅರ್ಥೈಸುವ (ನನಗೆ-ನಿನಗೆ ಮಾತ್ರ) ಮೌನಿಯಾಗಿ ಬರುವೆಯೆಂದು !

* ಕೆಲವೊಮ್ಮೆ ನಾನು ಸಿಕ್ಕಾಪಟ್ಟೆ ಧೂಮ-ಮಾದಕ ವ್ಯಸನಿ ಕೊನೆಗೆ ಮತ್ತೆ ಜಡ....

ನೀನು ಪ್ರಕೃತಿಯ ಜೀವಿ ಸೊಳ್ಳೆಯಾಗಿ ಬಂದು ನನ್ನ ಕುತುಕುವಿಯೆಂದು !

ನಿನ್ನ ಸ್ಪರ್ಶವಾದರೂ ಸಿಗಬಹುದೆಂಬ ಹಂಬಲದಿಂದ !

* ಕೆಲವೊಮ್ಮೆ ನಾನು ಸಿಗದ ಸಂತೋಷಕ್ಕಾಗಿ ಹಂಬಲಿಸುವವ............

ನೀನು ನಾಳೆಯಾದರೂ ಸಿಗಬಹುದೆಂದು !

* ಕೆಲವೊಮ್ಮೆ ನಾನು ಸಾವಿನ ಕಣಿವೆಗಳಲ್ಲಿ ನಡೆಯಬೇಕೆಂಬ ಹುಂಬತನ ...........

ನೀನು ನನ್ನವಳಾಗಿ ನಿನ್ನ ಕಾಲ್ಪನಿಕ ಧ್ವನಿಯಾದರೂ ಕೇಳಬಹುದೆಂದು !

* ಕೆಲವೊಮ್ಮೆ ನಾನು, ನೀನು ನನಗೆ ಸಿಗಲಿಲ್ಲ ಎಂದು ನಿಡುಸುಯ್ಯುವವ .........

ನೀನು ನಾಳೆಯಾದರೂ ಸಿಗುವೆ ( ಕಾಲ್ಕ್ಪನಿಕ ) ಎಂಬ ಭರವಸೆಯಿಂದ !

* ಕೊನೆಗೆ ,,,,,

* ಈ ಕೆಲವೊಮ್ಮೆ ನನ್ನೆಲ್ಲ ಬೇಸರಗಳನ್ನ ಮಡಚಿಟ್ಟು ಹೊಸ ದಿಗಂತ, ಮುಂಜಾನೆಯತ್ತ ಹೆಜ್ಜೆಯಿಡಲು ಧೈರ್ಯಹಾಕುವವ ........

ನೀನು ನನ್ನವಳಾಗಿ ನನ್ನ ಜೊತೆಗೆಯೇ, ನನ್ನ ಬೆನ್ನ ಹಿಂದೆಯೇ ಹಾರೈಸುತ್ತೆಯೆಂದು !

So ಬರ್ತಿಯಲ್ಲ ?????

ಇಂತಿ ನಿನ್ನ ಪ್ರೀತಿಯ ........

ಅಸಹನೆಯಿಂದ ಕದಲುತ್ತಿರುವ ಅತೃಪ್ತ ಸಮುದ್ರ .....

ನಿಮ್ಮ ನಗು ಪ್ರಿಯದರ್ಶಿ ........

Sunday, August 17, 2008

"ವಿ" ಚಿತ್ರ ಪ್ರೇಮ........

ನನ್ನವಳ ನಗುವೇ ನನಗೆ ಅರುಣೋದಯ,
ನನ್ನವಳ ಹುಸಿಮುನಿಸು ನನಗೆ ಸೂರ್ಯಾಸ್ತ,
ನನ್ನವಳ ಮರುಮಾತು ನನಗೆ ಹೊಸ ಆನಂದವು,
ನನ್ನವಳ ಜೊತೆಗಿನ ಜಗಳ,ಅದರಲ್ಲಿಸೋತು ಗೆಲ್ಲುವ ಖುಷಿ,
ನನಗೆ ಬಲು/ತುಂಬಾ ಇಷ್ಟ,
ಅವಳ ಮಾತಿನಲ್ಲಿರುವ ಪ್ರತಿ ಅವಲೋಕನ ನನಗೆ ಇಷ್ಟ, ಅದು ಅವಳಿಗೂ ಕೂಡ,,
ಆದರೂ ಅವಳಂತಹ ಒಳ್ಳೆಯವಳನ್ನ ಪ್ರೀತಿಸಿ ಅದ್ಹೇಗೆ, ಅದ್ಹೇಗೆ ನಾನು ಮೋಸ ಹೋದೆ ?
ಕೊನೆಗೂ ಗೊತ್ತಾಗದೇ ಹೋಯ್ತು.
ಅವಳ ಒಂದು ಶೂನ್ಯ ಮೌನ ನನಗೆ ಸಾವಿನ ಹೊಸ್ತಿಲು,
ಇಷ್ಟೆಲ್ಲದರ ನಡುವೆಯೂ ಅವಳು ನನಗೆ ಇಷ್ಟ
,ಏಕೆಂದರೆ "ಅವಳು ನನ್ನ ಕಲ್ಪನೆಯಲ್ಲಿ ಕೆತ್ತಲ್ಪಡುವ/ಕೆತ್ತಲ್ಪಟ್ಟ ವಾಸ್ತವದ ಕಲಾಕೃತಿ",,,,,
ಅವಳೇ ನನಗೆ ಸಾವು, ಅವಳೇ ನನಗೆ ಹುಟ್ಟು ಕೂಡ......
ನಿಮ್ಮ ನಗು ಪ್ರಿಯದರ್ಶಿ......