ಅವಳದು ಕುರುಪ ಸೌಂದರ್ಯ, ನಾನೊಬ್ಬ ಶ್ರೀಮಂತ ಭಿಕ್ಷುಕ,,,,,
ಆದರು ನಾವಿಬ್ಬರೂ ವಬ್ಬರಿಗೊಬ್ಬರು ಇಷ್ಟ, ತುಂಬಾ ದಿನ ಆಯ್ತು ನಿನ್ ನೋಡಿ ಬಾರೋ ಅಂತಾಳೆ.
ಹೋದ್ರೆ ಮಾತೆ ಬರೋಲ್ಲ, ಯಾವಾಗಲು ನನ್ ಮಾತು ಜಾಸ್ತಿ ಅಂತಿದ್ಲು, ಇವತ್ತು ಮಾತೆ ಹೊರಡ್ತಿಲ್ಲ.
ಏನಾದ್ರು ಹೇಳು ಅಂದ್ರೆ ಸುಮ್ನೆ ಕೂತ್ಕೋ, ಇವತ್ತು ನಮ್ಮಿಬ್ಬರ ನೋಡಿ ಶಶಿ ನಗುತಿರುವ, ಹೀಗೆ ಬೆಳದಿಂಗಳ ಕಾರ್ಮುಗಿಲಿನಲ್ಲೇ ರಾತ್ರಿ ಕಳೆಯೋಣ ಅಂತಾಳೆ..
ಸುಮ್ಮನೆ ಅಂಗಾತ ಮಲಗಿ ನಕ್ಷತ್ರಗಳ ಎಣಿಸುತ್ತ ಆಟ ಆಡೋಣ ಅಂತಾಳೆ.
ಬೇಡ ಅಂದ್ರೆ ಸುಮ್ಮನೆ ಮುತ್ತಿಕ್ಕಿ ನಸು ನಾಚುತ್ತಾಳೆ ನನ್ನೀ ಹುಡುಗಿ.
ಹೇಳುತ್ತಲೇ ಹೋಗ್ತಾಳೆ ಆದ್ರೆ,,,,,,,
ಅವಳದು ಸ್ವಲ್ಪ ವರಟು ಮಾತು - ನಂಗೆ ಅರ್ಥ ಆಗೋಲ್ಲ,
ನನ್ನದು ಸ್ವಲ್ಪ ವಗಟು ಮಾತು ಅವಳಿಗೆ ಅರ್ಥ ಆಗೋಲ್ಲ....
ನನ್ನ ನೆನಸ್ಕೊಂಡ ಅಂತ ಕೇಳ್ತಾಳೆ , ನಾನು - ನಿನ್ನ ಮರೆಯೋಕ್ಕೆ ಪುರುಸೊತ್ತು ಆದ್ರೆ ತಾನೇ ಅಂತ ಹೇಳಿದೆ...
ನಾನು ಕನಸ್ನಲ್ಲಿ ಬಂದನಾ ಅಂತಾಳೆ - ನಾನು ಮಲಗುವುದೆ ನಿನ್ನ ಕನಸುಗಳ ಮಧ್ಯೆ ಅಂತ ಹೇಳಿದೆ...
ನಂತರ ಅವಳದು ಮೌನ ಸರದಿ, ಸ್ವಲ್ಪ ಮುನಿಸು..
ನಾನಂದೆ ನಿನ್ನ ಮುನಿಸು - ನನ್ನ ಮುನಿಸಿನಿಂದ ಈ ಜೀವನವೇ ಮುನಿಸಿಕೊಂಡಿದೆ...
ನಮ್ಮಿಬ್ಬರ ಮಿಲನ ಬಲು ಚೆಂದ ಕಣ್ರೀ.
ಏನಂತಿರ??ನಿಮ್ಮ ನಗು ಪ್ರಿಯದರ್ಶಿ.....
Tuesday, July 1, 2008
Subscribe to:
Posts (Atom)